ಅಮೆರಿಕಕ್ಕೆ ರಫ್ತಾಗಲಿವೆ ಬಜಾಜ್'ನ ಕೆಟಿಎಂ ಬೈಕುಗಳು
ಅಮೆರಿಕಕ್ಕೆ ರಫ್ತಾಗಲಿವೆ ಬಜಾಜ್'ನ ಕೆಟಿಎಂ ಬೈಕುಗಳು
ಪುಣೆ:
ಭಾರತದಲ್ಲಿ ತಯಾರಾಗುವ ಕೆಟಿಎಂ ಬೈಕುಗಳನ್ನ ಈ ವರ್ಷ ಅಮೆರಿಕಕ್ಕೆ ರಫ್ತು ಮಾಡಲು ಬಜಾಜ್ ಕಂಪನಿ ಯೋಜಿಸಿದೆ. ಅಮೆರಿಕದಲ್ಲಿ ಕೆಟಿಎಂ ಬೈಕುಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಬರುತ್ತಿರುವುದರಿಂದ ಭಾರತದಿಂದ ಈ ಬೈಕುಗಳನ್ನ ಆ ದೇಶಕ್ಕೆ ಎಕ್ಸ್'ಪೋರ್ಟ್ ಮಾಡಲು ನಿರ್ಧರಿಸಲಾಗಿದೆ.
ಆಸ್ಟ್ರಿಯಾ ದೇಶದ ಪ್ರಮುಖ ಮೋಟಾರ್'ಸೈಕಲ್ ಕಂಪನಿಯಾದ ಕೆಟಿಎಂನಲ್ಲಿ ಬಜಾಜ್ ಶೇ.47ರಷ್ಟು ಪಾಲುದಾರಿಕೆ ಹೊಂದಿದೆ. ಪುಣೆಯಲ್ಲಿರುವ ಚಕನ್ ಬಳಿ ಇರುವ ಬಜಾಜ್ ಘಟಕದಲ್ಲಿ ಕೆಟಿಎಂನ ಬೈಕುಗಳನ್ನ ತಯಾರಿಸಲಾಗುತ್ತಿದೆ. ಡ್ಯೂಕ್ ಸರಣಿಯ ಬೈಕುಗಳು ಕೆಟಿಎಂನ ಅತ್ಯಂತ ಜನಪ್ರಿಯ ಮಾಡೆಲ್'ಗಳಾಗಿವೆ. ಹಾಗೆಯೇ, ಆರ್'ಸಿ ಸರಣಿಯ ಬೈಕುಗಳೂ ಕೂಡ ಒಳ್ಳೆಯ ಬೇಡಿಕೆ ಪಡೆದಿವೆ.
ಕೆಟಿಎಂ ಬೈಕುಗಳು ಇಷ್ಟು ಜನಪ್ರಿಯವಾಗಲು ಪ್ರಮುಖ ಕಾರಣ ಇದರ ವಿಶಿಷ್ಟ ಡಿಸೈನ್. ಜೊತೆಗೆ ಒಳ್ಳೆಯ ಮೈಲೇಜು ಕೊಡುವ ಈ ಬೈಕುಗಳು ಯುವ ಜನತೆಯ ಪಾಲಿಗೆ ಫೇವರಿಟ್ ಎನಿಸಿದೆ.
Source: Suvarna News 27/7.