ಮೊಬೈಲ್‌ನಿಂದ ಮೆಸೇಜ್ ಕಳಿಸಿ, ಹಣ ರವಾನಿಸಿ
ಮೊಬೈಲ್‌ನಿಂದ ಮೆಸೇಜ್ ಕಳಿಸಿ, ಹಣ ರವಾನಿಸಿ
ಇನ್ನು ಮುಂದೆ ಬ್ಯಾಂಕಿಂಗ್ ಸೇವೆಗಳು ಮತ್ತಷ್ಟು ಸುಲಭವಾಗಲಿದೆ. ನಿಧಿ ವರ್ಗಾವಣೆ, ಬಾಲೆನ್ಸ್ ಪರಿಶೀಲನೆ, ಹೊಸ ಪಾಸ್ ಪುಸ್ತಕ ಪಡೆಯಲು ಕೇವಲ ಒಂದು ಮೆಸೇಜ್ ಕಳುಹಿಸಿದರೆ ಸಾಕು... ಹೌದು.. ಅಂಥ ಒಂದು ಪ್ರಯತ್ನ ಸದ್ದಿಲ್ಲದೇ ಮೊಬೈಲ್ ಕಂಪನಿಗಳಿಂದ ಆರಂಭವಾಗಿದೆ. ನರೇಂದ್ರ ಮೋದಿ ಸರ್ಕಾರದ ಹೊಸ ಘೋಷಣೆಗಳಿಗೆ ನೆರವಾಗಲು ಮುಂದಾಗಿರುವ ಮೊಬೈಲ್ ಕಂಪನಿಗಳು ಇಂಥ ಸಂದೇಶ ವ್ಯವಸ್ಥೆ ಜಾರಿ ಮಾಡಲು ಚಿಂತಿಸಿವೆ.
ಮತ್ತೊಂದು ವಿಶೇಷ ಎಂದರೆ ಸಾಮಾನ್ಯ ಹ್ಯಾಂಡ್‌ಸೆಟ್‌ವೊಂದರ ಸಂದೇಶ ಎಲ್ಲ ಕೆಲಸ ಮಾಡಿ ಮುಗಿಸುತ್ತದೆ. ಇದಕ್ಕೆ ಅಂತರ್ಜಾಲ ಸಂಪರ್ಕವೂ ಅಗತ್ಯವಿರುವುದಿಲ್ಲ.
ಮತ್ತೊಂದು ವಿಶೇಷ ಎಂದರೆ ಸಾಮಾನ್ಯ ಹ್ಯಾಂಡ್‌ಸೆಟ್‌ವೊಂದರ ಸಂದೇಶ ಎಲ್ಲ ಕೆಲಸ ಮಾಡಿ ಮುಗಿಸುತ್ತದೆ. ಇದಕ್ಕೆ ಅಂತರ್ಜಾಲ ಸಂಪರ್ಕವೂ ಅಗತ್ಯವಿರುವುದಿಲ್ಲ.
ಕಳೆದ ಎರಡು ತಿಂಗಳಿನಲ್ಲಿ ಹತ್ತು ಟೆಲಿಕಾಂ ಕಂಪನಿಗಳು ನೂತನ ಸೇವೆಗೆ ಸಂಬಂಧಿಸಿ ನ್ಯಾಶನಲ್ ಪೆಮೆಂಟ್ಸ್ ಕಾರ್ಪೋರೇಶನ್ (ಎನ್‌ಸಿಪಿಐ) ಜತೆ ಮಾತುಕತೆ ನಡೆಸಿವೆ. ಬ್ಯಾಂಕ್ ಖಾತೆ ಮತ್ತು ಮೊಬೈಲ್ ಹೊಂದಿರುವ ಯಾರೂ ಬೇಕಾದರೂ ಸಂದೇಶಗಳ ಮೂಲಕ ಕಾರ್ಯನಿರ್ವಹಿಸಬಹುದು. ಆದರೆ ಇದು ಕಡಿಮೆ ಮೊತ್ತದ ಬಿಲ್ ಪಾವತಿಯಂಥ ಸಂದರ್ಭ ಕೆಲ ನಿರ್ಬಂಧಕ್ಕೆ ಒಳಗಾಗುತ್ತದೆ ಎಂದು ಎನ್‌ಸಿಪಿಐ ಸಿಇಒ ಎ.ಪಿ.ಹೋಟಾ ತಿಳಿಸಿದ್ದಾರೆ.
ಸಿಒಎಐ ಜಿಎಸ್‌ಎಂ ವಿಭಾಗದ ನಿರ್ದೇಶಕ ರಾಜನ್ ಮ್ಯಾಥ್ಯುಸ್ ಹೇಳುವಂತೆ, ಪ್ರತಿಯೊಂದು ಮೆಸೇಜ್‌ಗೆ 1.50ರೂ ವೆಚ್ಚ ತಗಲುತ್ತದೆ. ಸಂಬಂಧಿಸಿದ ಬ್ಯಾಂಕ್ ಸೇವೆಯ ಗುಣಮಟ್ಟ ಕಾಯ್ದುಕೊಳ್ಳುವ ಜವಾಬ್ದಾರಿ ಹೊಂದಿರುತ್ತದೆ. ನಾವು ಕೇವಲ ಸೇವೆ ಒದಗಿಸುತ್ತೆವೆಯೇ ವಿನಃ ನಿರ್ವಹಣೆಯನ್ನಲ್ಲ ಎಂದು ಸ್ಪಷ್ಟಪಡಿದ್ದಾರೆ. ಈ ಯೋಜನೆ ಸಮರ್ಪಕವಾಗಿ ಅನುಷ್ಠಾನವಾದರೆ ಭಾರತೀಯು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಸಂಚಲನವೇ ಉಂಟಾಗಲಿದ್ದು ಎಟಿಎಂಗೆ ತೆರಳುವ ತಾಪತ್ರಯಕ್ಕೂ ತೆರೆ ಬೀಳಲಿದೆ.
English summary:
English summary:
Mobile companies think to intraducing a new programme. which is based on mobile banking service. Fund transfer, balance inquiry in savings account, change of PIN, mini statement, cheque book request, etc, will be possible with simple text messages from ordinary handsets and without accessing the internet.
Source: OneIndia Kannada.
Source: OneIndia Kannada.