Header Ads

ನಾಳೆಯಿಂದ ಎಟಿಎಂ ಬಳಕೆ ದುಬಾರಿ

ನಾಳೆಯಿಂದ ಎಟಿಎಂ ಬಳಕೆ ದುಬಾರಿ


ನವದೆಹಲಿ:
          ಬ್ಯಾಂಕ್ ಗ್ರಾಹಕರಿಗೆ ಇದೊಂದು ಕಹಿ ಸುದ್ದಿ. ಎಲ್ಲೆಂದರಲ್ಲಿ ಎಟಿಎಂ ಕೇಂದ್ರಗಳಿಗೆ ನುಗ್ಗಿ, ಮನ ಬಂದಂತೆ ಡೆಬಿಟ್ ಕಾರ್ಡ್‌ನ್ನು ಬಳಸುವ ಮುನ್ನ ಸ್ವಲ್ಪ ಚಿಂತಿಸಿ. ಏಕೆಂದರೆ, ಎಟಿಎಂ ಬಳಕೆ ಕುರಿತು ಆರ್‌ಬಿಐ ಹೊಸ ನಿಯಮ ಜಾರಿಗೆ ತಂದಿದೆ.

ಎಟಿಎಂ ಉಚಿತ ಬಳಕೆಗೆ ಇದ್ದ ಮಿತಿಯನ್ನು ಇತ್ತೀಚೆಗೆ ಆರ್‌ಬಿಐ ಕಡಿತಗೊಳಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಅಧಿಸೂಚನೆಯ ಪ್ರಕಾರ, ಗ್ರಾಹಕ ಖಾತೆ ಹೊಂದಿರುವ ಬ್ಯಾಂಕ್‌ನ ಎಟಿಎಂಗಳಲ್ಲೇ ನಡೆಸುವ ಮಾಸಿಕ 5 ವಹಿವಾಟು ಮತ್ತು ಇತರೆ ಬ್ಯಾಂಕ್‌ಗಳ ಎಟಿಎಂಗಳಲ್ಲಿ ನಡೆಸುವ ಮಾಸಿಕ 3 ವಹಿವಾಟು ಮಾತ್ರ ಉಚಿತವಾಗಿ ಸಿಗಲಿದೆ. ನವೆಂಬರ್ 1ರಿಂದ ಈ ನಿಯಮ ಜಾರಿಗೆ ಬರಲಿದೆ.
ನಾಳೆಯಿಂದ ಎಟಿಎಂ ಬಳಕೆ ದುಬಾರಿ | TekkiPedia
ನಾಳೆಯಿಂದ ಎಟಿಎಂ ಬಳಕೆ ದುಬಾರಿ | TekkiPedia

         ನಾಳೆಯಿಂದ ಗ್ರಾಹಕರು ಖಾತೆ ಇರುವ ಬ್ಯಾಂಕ್‌ನ ಎಟಿಂಗಳಲ್ಲಿ ಮಾಸಿಕ 5ಕ್ಕಿಂತ ಹೆಚ್ಚಿನ ವಹಿವಾಟು ನಡೆಸಿದರೆ, ಪ್ರತಿ ವಹಿವಾಟಿಗೆ ಶುಲ್ಕ ವಿಧಿಸಲು ಆರ್‌ಬಿಐ, ಬ್ಯಾಂಕ್‌ಗಳಿಗೆ ಅನುಮತಿ ನೀಡಿದೆ. ಬೇರೆ ಬ್ಯಾಂಕ್ ಎಟಿಎಂಗಳಲ್ಲಿ 3ಕ್ಕಿಂತ ಹೆಚ್ಚಿನ ವಹಿವಾಟು ನಡೆಸಿದರೆ, ಪ್ರತಿ ವಹಿವಾಟಿಗೆ ರು.20 ರವರೆಗೆ ಶುಲ್ಕ ನೀಡಬೇಕಾಗುತ್ತದೆ.

         ಹಣ ಪಡೆಯಲು, ಬ್ಯಾಂಕ್ ಬ್ಯಾಲೆನ್ಸ್ ತಿಳಿಯಲು, ಮಿನಿ ಸ್ಟೇಟ್‌ಮೆಂಟ್ ಪಡೆಯಲು ದಿನದ ಮೂರು ಹೊತ್ತು ಪದೇ ಪದೇ ಕಾರ್ಡ್ ಸ್ಪೈಪ್ ಮಾಡಿದರೆ, ಪ್ರತಿ ವಹಿವಾಟಿಗೂ ಗ್ರಾಹಕರೂ 20 ರು. ವರೆಗೆ ಶುಲ್ಕ ತೆರಬೇಕಾಗುತ್ತದೆ.

English summary:
       From Saturday (November 1), frequent withdrawal of money from ATMs will be costlier with the Reserve Bank of India (RBI) having imposed a limit of 3 cross-bank transaction per month from other banks and 5 from same bank.

Source: KannadaPrabha.
Powered by Blogger.